यह लेख अभी हिंदी में उपलब्ध नहीं है — कन्नड़ संस्करण दिखाया जा रहा है।
ಪತ್ರಕರ್ತ ವೆಂಕಟೇಶ ಎಸ್ ಸಂಪ ಅವರಿಗೆ ಪ್ರತಿಷ್ಠಿತ ‘ಇಂಟರ್‌ನ್ಯಾಷನಲ್ ನೋಬ್ಲರ್ ಅವಾರ್ಡ್–2026’
ಪತ್ರಕರ್ತ ವೆಂಕಟೇಶ ಎಸ್ ಸಂಪ ಅವರಿಗೆ ಪ್ರತಿಷ್ಠಿತ ‘ಇಂಟರ್‌ನ್ಯಾಷನಲ್ ನೋಬ್ಲರ್ ಅವಾರ್ಡ್–2026’

ಕಳೆದ ಎರಡು ದಶಕಗಳಿಂದ ಧನಾತ್ಮಕ ಪತ್ರಿಕೋದ್ಯಮದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಾ, ಯುವ ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಪತ್ರಕರ್ತ ಹಾಗೂ ‘ಸಂಪದ ಸಾಲು’ ಪತ್ರಿಕೆಯ ಸಂಪಾದಕ ವೆಂಕಟೇಶ ಎಸ್ ಸಂಪ ಅವರಿಗೆ ಮತ್ತೊಂದು ಪ್ರತಿಷ್ಠಿತ ಗೌರವ ಲಭಿಸಲಿದೆ. ಜಿಎಸ್ ಹೈ-ಟೆಕ್ ಸೊಲ್ಯೂಷನ್ಸ್ (GS High-Tech Solutions) ಸಂಸ್ಥೆ ಮತ್ತು ಕನ್ನಡ ಸ್ನೇಹ ಬಳಗ ನೀಡುವ ‘ಇಂಟರ್‌ನ್ಯಾಷನಲ್ ನೋಬ್ಲರ್ ಅವಾರ್ಡ್–2026’ ಅನ್ನು 2026ರ ಅಕ್ಟೋಬರ್ 25 ರಂದು ಗೋವಾದಲ್ಲಿ ಪ್ರದಾನ ಮಾಡಲಾಗುವುದು ಎಂದು ಸಂಘಟಕ ಮತ್ತು ಉದ್ಯಮಿ ಡಾ.ಜಿ. ಶಿವಣ್ಣ ತಿಳಿಸಿದ್ದಾರೆ.
ಈಗಾಗಲೇ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ರಾಜ್ಯ ಪ್ರಶಸ್ತಿ,ಕೇಂದ್ರ ಸರ್ಕಾರದ ಸಹಯೋಗದ ಡಾ. ಎ.ಪಿ. ಜೆ ಅಬ್ದುಲ್ ಕಲಾಂ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿ ಗೌರವಗಳಿಗೆ ಭಾಜನರಾಗಿರುವ ವೆಂಕಟೇಶ ಎಸ್ ಸಂಪ ಅವರಿಗೆ ಮತ್ತೊಂದು ಪ್ರಶಸ್ತಿ ಘೋಷಣೆಯಾಗಿರುವುದು ಅವರ ಪತ್ರಿಕೋದ್ಯಮ ಹಾಗೂ ಸಾಮಾಜಿಕ ಸೇವಾ ಕ್ಷೇತ್ರದ ಸಾಧನೆಗೆ ಸಂದ ಗೌರವವೆಂದು ಪರಿಗಣಿಸಲಾಗಿದೆ
ವೆಂಕಟೇಶ ಎಸ್ ಸಂಪ ಅವರು ಕಳೆದ 20 ವರ್ಷಗಳಿಂದ ‘ಸಂಪದ ಸಾಲು’ ಎಂಬ ಧನಾತ್ಮಕ ಕನ್ನಡ ಪತ್ರಿಕೆಯನ್ನು ನಿರಂತರವಾಗಿ ಮುನ್ನಡೆಸುತ್ತಿದ್ದಾರೆ. ಸಮಾಜಮುಖಿ ಚಿಂತನೆ, ಯುವಜನರಿಗೆ ಪ್ರೇರಣೆ, ಮಾನವೀಯ ಮೌಲ್ಯಗಳ ಪ್ರತಿಪಾದನೆ ಹಾಗೂ ಸಕಾರಾತ್ಮಕ ಬದಲಾವಣೆಯ ಆಶಯಗಳನ್ನು ತಮ್ಮ ಬರಹಗಳ ಮೂಲಕ ಓದುಗರಿಗೆ ತಲುಪಿಸುತ್ತಿದ್ದಾರೆ.
यह सामग्री संपदा सालू के कॉपीराइट में है. कृपया शेयर या प्रिंट बटन का उपयोग करें.
