Not yet available in English — showing the Kannada version.
ಕನ್ನಡವೆಂಬುದು ಕೇವಲ ಭಾಷೆಯಲ್ಲ… ನಮ್ಮ ಅಸ್ಮಿತೆಯ ಉಸಿರು!
ಒಂದು ಮಗು ಮೊದಲ ಬಾರಿಗೆ ಅಮ್ಮ ಎಂದು ಕರೆದಾಗ ಆ ಶಬ್ದದಲ್ಲಿ ಪ್ರೀತಿಯಿರುತ್ತದೆ. ಆ ಮಗುವಿಗೆ ಜಗತ್ತನ್ನು ಪರಿಚಯಿಸುವ ಮೊದಲ ಭಾಷೆಯಲ್ಲೊಂದು ತಾಯಿಯ ಭಾಷೆ. ಬದುಕಿನ ಮೊದಲ ಅಳು, ಮೊದಲ ನಗು, ಮೊದಲ ಮಾತು, ಮೊದಲ ಕನಸು ಎಲ್ಲದರಲ್ಲೂ ಒಂದು ಭಾಷೆಯ ಭಾವನೆ ಬೆರೆತಿರುತ್ತದೆ. ನಮ್ಮ ಪಾಲಿಗೆ ಆ ಭಾಷೆ ಕನ್ನಡ!

ಕನ್ನಡವೆಂದರೆ ಕೇವಲ ಅಕ್ಷರಗಳ ಜೋಡಣೆಯಲ್ಲ. ಅದು ನಮ್ಮ ತಾಯಿಯ ಮಮತೆ, ಅಜ್ಜಿಯ ಕಥೆ, ಹಳ್ಳಿಯ ಮಣ್ಣಿನ ಸುವಾಸನೆ, ರೈತನ ಬೆವರಿನ ಹನಿ, ಕವಿಯ ಕಲ್ಪನೆ, ಹೋರಾಟಗಾರನ ಹಠ ಮತ್ತು ಕನ್ನಡಿಗನ ಆತ್ಮಗೌರವ. ಇಂತಹ ಕನ್ನಡದ ಹಬ್ಬವನ್ನು ಆಚರಿಸುವ ನವೆಂಬರ್ 1 ಕೇವಲ ಸಂಭ್ರಮದ ದಿನವಲ್ಲ, ನಮ್ಮ ಭಾಷೆಯ ಬಗ್ಗೆ ನಾವು ಎಷ್ಟು ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದೇವೆ ಎಂಬುದನ್ನು ಪ್ರಶ್ನಿಸಿಕೊಳ್ಳುವ ದಿನವೂ ಹೌದು.
Content is copyright of Sampada Saalu. Please use the Share or Print buttons.
Loading the full article…